Friday 17 June 2011

*ಪ್ರೀತಿ ಅಮರ*ಪ್ರೀತಿ ಮಧುರ* ಹೌದು ನೆನಪಿದೆಯಾ?

ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ ಹುಡುಗಿ ಕೈಕೊಟ್ಳು ಅಂತ..... ಆದರೇ ನನ್ನ  ಕಥೆ
ತುಂಬಾ ದೊಡ್ಡದಾಗಿದೆ ನಾನು ಇಲ್ಲಿ ಸ್ವಲ್ಪ ಮಾತ್ರ ತಿಳಿಸಬಯಸುತ್ತೇನೆ.
*ಪ್ರೀತಿ ಅಮರ*ಪ್ರೀತಿ ಮಧುರ* ಹೌದು ನೆನಪಿದೆಯಾ? ನಿನಗೆ ನಿನ್ನನ್ನು ನೋಡಿದ ಮೊದಲನೇ
ದಿನದಂದೇ ನನ್ನ ಮನದಲ್ಲಿ ನನಗೇ ತಿಳಿಯದ ಏನೋ ಒಂದು ರೀತಿಯ ಮಧುರ ಅನುಭವ. ನನ್ನ
ಪ್ರೀತಿಯನ್ನು ನಿನ್ನಲ್ಲಿ ವ್ಯಕ್ತಪಡಿಸಿದಾಗ ನೀನು ನಿರಾಕರಿಸಿದೆ, ಆಗ ನನ್ನ ಮನದಲ್ಲಿ
ಉಂಟಾದ ನೋವು ಎಂತಹುದೆಂದು ನನಗೇ ಮಾತ್ರ ತಿಳಿದಿತ್ತು. ನೀನು ನನ್ನಲ್ಲಿ ಪ್ರೀತಿಯಿಂದ
ಮಾತನಾಡುತ್ತಿದ್ದೆಯೋ / ಸ್ನೇಹದಿಂದಲೋ / ಬೇಸರವಾದಾಗ ಒಂದು ಮಾತು ಬರುವ ಗೊಂಬೆಯೆಂದು
ತಿಳಿದಿದ್ದೆಯೇನೊ...... ಆದರೆ, ನಾನು ಮಾತ್ರ ನಿನ್ನನ್ನು ಪ್ರೀತಿಯಿಂದಲೇ
ಮಾತನಾಡುತ್ತಿದ್ದೆ.
ನೀನು ಹಲವು ಬಾರಿ ನನ್ನಲ್ಲಿ ಹೇಳಿದ್ದೀ ನನ್ನಗಿಂತ ಒಳ್ಳೇ ಹುಡುಗನನ್ನು ನೋಡಿ
ಮದುವೆಯಾಗು ಎಂದು ಆದರೆ ನೀವು ಒಂದಲ್ಲ ಒಂದು ದಿನ ನನ್ನ ಪ್ರೀತಿಯನ್ನು
ಒಪ್ಪಿಕೊಳ್ಳುತ್ತೀರ, ಪ್ರೀತಿಗೆ ಮನ ಸೋಲದವರ್ಯಾರು ಇಲ್ಲ ಎಂದು ನಿರಂತರ ಪ್ರಯತ್ನ
ಪಡುತ್ತಿದ್ದೆ ನಿನ್ನ ಪ್ರೀತಿ ಪಡೆಯಲು. ಕೊನೆಗೊಂದು ದಿನ ನೀನು ನನ್ನ ಪ್ರೀತಿಯನ್ನು
ಅಂಗೀಕರಿಸಿದೆ. ನೀನು ನನ್ನಲ್ಲಿ ಸಲುಗೆಯಿಂದ ಮಾತನಾಡುವಾಗ, ನನಗೆ ಭರವಸೆ ನೀಡುವ ಹಾಗೆ
ಮಾತನಾಡುವಾಗ ನನ್ನಲ್ಲಿ ನಾನೇ ಅದೆಷ್ಟು ಸಂತೋಷಪಟ್ಟೆನೆಂದು ನಿನಗೆ ತಿಳಿಯದು. ನಿನ್ನ
ಪ್ರೀತಿ ನನಗೆ ಸಿಕ್ಕಿದ್ದು ನನ್ನ ಪುಣ್ಯ ಎಂದು ತಿಳಿದುಕೊಡಿದ್ದೆ. ನಿಮ್ಮನ್ನು ಎಷ್ಟು
ಪ್ರೀತಿಸುತ್ತೇನೆ ಎಂದು ನಿಮಗೆ ಸಹ ತಿಳಿದಿದೆ.
ನನ್ನ ಪ್ರೀತಿ ಎಷ್ಟರ ಮಟ್ಟಿಗೆ ಎಂದರೆ ನಾನು ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲೆ,
ಕೊನೆಗೆ ಪ್ರಾಣ ತ್ಯಾಗಕ್ಕೂ ಸಹ ಹಿಂಜರಿಯುವುದಿಲ್ಲ ಎಂದು ನಿನಗೆ ತಿಳಿದಿದೆ. ಆದರೂ,
ಇತ್ತೀಚೆಗೆ ನೀವು ಬೇರೆಯವರನ್ನು ನೋಡಿ ಮದುವೆಯಾಗು ಎಂದು ಹೇಳುವುದು ಅದಕ್ಕೆ ಬೆಂಬಲ
ನೀಡುವಂತೆ ಮಾತನಾಡುವುದು ಸರಿಯೇ? ನಿಮ್ಮನ್ನು ಪ್ರೀತಿಸಿ ಬೇರೆಯವರನ್ನು ಮದುವೆಯಾದರೆ
ಅಲ್ಲಿ ಮೂರು ಜೀವಗಳ ಬಲಿಯಾಗುವುದೆಂದು ನಿಮಗೆ ತಿಳಿಯದೇ? ನೀವೂ ಸಹ ನನ್ನನ್ನು
ಪ್ರೀತಿಸಿದ್ದೀರ ನಿಮಗೆ ನನ್ನನ್ನು ಮರೆಯಲು ಸಾಧ್ಯವೇ? ಎಂದು ನಾನು ನಿಮ್ಮಲ್ಲಿ
ಕೇಳಿದಾಗ ಪ್ರೀತಿ ಮಾಡುವುದು ಸುಲಭ ಹಾಗೆ ಮರೆಯುವುದು ಸುಲಭ, ಬೇರೆಯವರನ್ನು ಮದುವೆ
ಮಾಡಿಕೊಂಡರೆ ತಂತಾನೆ ಮರೆತುಹೊಗುತ್ತೆ  ಎಂದು ನೀವು ಪ್ರೀತಿಯ ಬಗ್ಗೆ ಹೇಳಿದ ಮಾತನ್ನು
ನನಗೆ ಇದುವರೆಗೂ ಮರೆಯಲಾಗುತ್ತಿಲ್ಲ. ನೀವು ಬೇರೆಯವರನ್ನು ಮದುವೆ ಮಾಡಿಕೊಂಡು
ಸಂಪೂರ್ಣ ಪ್ರೀತಿ ನೀಡಲು ಸಾಧ್ಯವೇ? ನಿಮ್ಮ ಹೃದಯದಲ್ಲಿ ಸಂಪೂರ್ಣ ಪ್ರೀತಿ ಆಕೆಯ ಮೇಲೆ
ಇರುವುದೇ? ನಿಮಗೆ ಜೀವನದಲ್ಲಿ ನನ್ನ ನೆನಪೇ ಬಾರದೆ?
ನೀನೇ ನನ್ನ ಮೊದಲನೆಯ ಪ್ರೀತಿ ಎಂದು ಹೇಳಲು ಸಾಧ್ಯವೇ? ನೀನಲ್ಲದೇ ನಾನು ಬೇರೆ
ಯಾರನ್ನು ಪ್ರೀತಿಸಿಲ್ಲ - ಪ್ರೀತಿಸುವುದಿಲ್ಲ ಎಂದು ಹೇಳಲು ಸಾಧ್ಯವೇ? ನನ್ನನ್ನು
ಹೆಚ್ಚಾಗಿ ಪ್ರೀತಿಸಿದವಳನ್ನು - ನಾನು ಪ್ರೀತಿಸಿದವಳನ್ನು ದೂರ ಮಾಡಿಕೊಂಡೆ ಎಂದು
ಅನಿಸದೆ?......... ಮದುವೆ ವಿಚಾರ ಬಂದಾಗ ಮದುವೆಗೆ ಹೆಚ್ಚು ವರದಕ್ಷಿಣೆ ಕೊಡಲು,
ಆಡಂಭರವಾಗಿ ಮದುವೆ ಮಾಡಿಕೊಡಲು ಆಗುವುದಿಲ್ಲ ಎಂದು ತಿಳಿದಾಗ, ನೀವು ನನಗೆ
ಬೇರೆಯವರನ್ನು ಮದುವೆ ಮಾಡಿಕೋ ಎಂದಿರಿ. ಹಣದಿಂದ ನಿಮಗೆ ಪ್ರೀತಿ ಸಿಗುವುದೇ? ನಿಮ್ಮ
ಕಷ್ಟ - ಸುಖದಲ್ಲಿ ಅರ್ಧಾಂಗಿ ಎನಿಸಿಕೊಳ್ಳುವುದು ಒಂದು ಹೆಣ್ಣು - ಹಣವಲ್ಲ.
ಪ್ರೀತಿಗೆ ಹಣವೇ ಮುಖ್ಯವೇ -  ಮನಸ್ಸು ಬೇಡವೇ? ಅಂದರೆ ಪ್ರೀತಿಯಲ್ಲಿ ಮನಸ್ಸಿಗೆ
ಬೆಲೆಯೇ ಇಲ್ಲವೇ?
ಪ್ರೀತಿಗೆ ಬೇಕಾದದ್ದು ಹಣವಾ - ಮನವಾ??
ನಿಮ್ಮ ಸಂತೋಷಕ್ಕಿಂತ ಮಿಗಿಲಾದದ್ದು ಬೇರೆ ಯಾವುದು ಇಲ್ಲ, ನೀವು ಯಾರನ್ನೇ ಮದುವೆಯಾಗಿ
ಚೆನ್ನಾಗಿರಿ, ಎಲ್ಲರೂ ಕೊನೆಗೊಂದು ದಿನ ಈ ಜೀವನಕ್ಕೆ ಮುಕ್ತಾಯ ಹಾಡಲೇ ಬೇಕು, ನಾನು ಈ
ಲೋಕವನ್ನು ತ್ಯಜಿಸಿದಾಗ ನೀವು ಗೊಳೋ ಎಂದು ಅಳದಿದ್ದರೂ----- ನಿಮ್ಮ ಕಣ್ಣಂಚಲ್ಲಿ
ಒಂದು ಹನಿ ಇಣುಕಿದರೆ ಸಾಕು ನನ್ನ ಪ್ರೀತಿ ಸಾರ್ಥಕ.
(ನನಗೆ ಚೆನ್ನಾಗಿ ವರ್ಣಿಸಿ ಬರೆದು ಅಭ್ಯಾಸವಿಲ್ಲ, ಪದಗಳಲ್ಲಿ ಏನಾದರೂ ತಪ್ಪಿದ್ದರೆ ತಿಳಿಸಿ)

Thursday 14 April 2011

ನನ್ನ ಧರ್ಮ

'ಅಂತರಂಗ'ಕ್ಕೆ ಸ್ವಾಗತ. ಬದುಕು ಬಹಳ ವಿಶೇಷವಾದದ್ದು, ಭೌತಿಕವಾಗಿ ಒಂದು ನೆಲೆಯಲ್ಲಿರುವ ನಾವು ಹಾಗು ಸ್ವಚ್ಛಂದವಾಗಿ ವಿಹರಿಸುವ ನಮ್ಮ ಮನಸ್ಸು ಇವುಗಳ ನಡುವಿನ ತಾಕಲಾಟ ಪೀಕಲಾಟಗಳ ದಾಖಲೆ ಈ ಬರಹ. ನಮ್ಮ ಭಾಷೆ ನಮಗೆ ದೂರವಾದಂತೆ ನಾವು ಅದರ ಹತ್ತಿರ ಹತ್ತಿರ ಹೋಗುವ ಪ್ರಯತ್ನ. ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ನನ್ನ ಧರ್ಮ

  "ನಮ್ಮ ಸಂಕುಚಿತ ಮನಸ್ಸುಗಳಿಗೆ ನಿಲುಕದ, ಅಪರಿಮಿತ ಶಕ್ತಿಯುಳ್ಳ ಅಮಿತನಾದ ಅಕ್ಷರನಾದ ಪರಮಾತ್ಮನಲ್ಲಿ ನಂಬಿಕೆಯಿಡುವುದೇ ನನ್ನ ಧರ್ಮ. ಅಂತರ್ಮುಖಿಯಾದ ನಂಬಿಕೆ ಯಾವ ನಿರ್ವಿಕಾರ ಶಕ್ತಿಯ ಮೇಲಿದೆಯೋ, ಯಾವುದು ಜಗತ್ತಿನ ಅಣು ಕಣಗಳಲ್ಲಿ ಅಡಕವಾಗಿದೆಯೋ, ಅದೇ ನನ್ನ ಪ್ರಕಾರ ದೇವರು." ಸಾಲುಗಳಲ್ಲಿ ವಿಶ್ಲೇಷಿಸಲ್ಪಟ್ಟಿರುವುದು ವಿಜ್ಞಾನಕ್ಕೂ ಅಧ್ಯಾತ್ಮಕ್ಕೂ ಕೊಂಡಿ ಹಾಕುವ ಹಾಗೂ ಪೂಜ್ಯ ಭಾವನೆ ಹುಟ್ಟಿಸುವ 'ಧರ್ಮ'ವನ್ನು. ಜಾತಿ ಮತ ಲಿಂಗ ಭೇದಗಳಿಲ್ಲದೆ ಹೃದಯಕ್ಕೆ ಹೃದಯವನ್ನು ಬೆಸೆಯುವುದೇ ನನ್ನಧರ್ಮ.
ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಹುಟ್ಟಿದ್ದರಿಂದ, ನನಗೆ ಚಿಕ್ಕಂದಿನಿಂದಲೂ 'ಧರ್ಮ'- ಪದದ ಅರಿವಿತ್ತು. ಬಾಲ್ಯದಲ್ಲಿ ಮೋಜಿಗಾಗಿ ಕೇಳುತ್ತಿದ್ದ ರಾಮ, ಕೃಷ್ಣರ ಕಥೆಗಳು ಹೇಗೋ ಒಂದು ರೀತಿಯಲ್ಲಾದರೂ ಮಾದರಿಯಾದವು. ಆದರೆ ಎಲ್ಲರೂ ಹೇಳುವ ಶ್ರೀ ವಿಷ್ಣುವಿನ ಅವತಾರ ರೂಪಗಳೇ ರಾಮ ಕೃಷ್ಣರು. ಅವರ ಮೇಲೆ ಪೂಜ್ಯ ಭಾವನೆ ಇದ್ದೆ ಇತ್ತು; ಏಕೆಂದರೆ ಅವರು ಜಗತ್ತಿನಲ್ಲಿದ್ದ ಸಟೆಗಳ  ಎದುರು, ಅನ್ಯಾಯದೆದುರು ಸೆಟೆದು ನಿಂತು ನ್ಯಾಯಮಾರ್ಗ ತುಳಿದವರುಅಲ್ಪರಾದ ಮಾನವರಂತೆ ಬದುಕಿದವರು. ನಾವಿಂದು ಹೆಜ್ಜೆಹೆಜ್ಜೆಗೂ ಕಾಣುತ್ತಿರುವ - ಅನುಭವಿಸುತ್ತಿರುವ ಸಾಮಾಜಿಕ ತೊಂದರೆಗಳಿಗೆ ಅವರೂ ಒಂದಿಲ್ಲೊಂದು ರೀತಿಯಲ್ಲಿ ಒಳಗಾದವರು. ಆದರೆ ಅವುಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕೆಮ್ಬುದನ್ನು ತೋರಿಸಿಕೊಟ್ಟವರೂ  ಅವರೇ. ನನ್ನ ದೃಷ್ಟಿಯಲ್ಲಿ ಅವರ ಗುಣಗಳೇ ಅವರನ್ನು ಪೂಜ್ಯರನ್ನಗಿ ಮಾಡಿವೆ, ಅವರ ಮಾಯಾ ಶಕ್ತಿಗಳಲ್ಲ.

  ನಮ್ಮ ಭಾರತಕ್ಕೆ ಅತ್ಯಪೂರ್ವ ಸ್ವಾರಸ್ಯಕರ ಇತಿಹಾಸ ಮತ್ತು ವೇದಗಳ ಸಮರ್ಥ ಮಾರ್ಗದರ್ಶನವಿದೆ. ಹೀಗಿದ್ದರೂ ಇಲ್ಲಿ ಜಾತೀಯತೆ ಹೇಗೆ ಬೆಳೆಯಿತು ಎಂಬುದೇ ಸೋಜಿಗದ ಸಂಗತಿ! ಉಪನಿಷತ್ತಿನ ಶ್ಲೋಕಗಳೇ ಆಗಲಿ, ಕುರಾನಿನ ಕುಲಾಂಗಳೇ  ಆಗಲಿ, ಬೈಬಲ್ ಕಮೆಂಡ್ಮೆಂಟ್ ಗಳೇ ಆಗಲಿ, ಗ್ರಂಥ ಸಾಹಿಬ್ ಗುರ್ಬೇಯ್ನ್ ಗಳೇ ಆಗಲಿ.,ಎಲ್ಲದರಲ್ಲಿ ಹೇಳಲ್ಪಡುವ ಅಂಶವೆಂದರೆ 'ಒಬ್ಬನು ಒಳ್ಳೆಯವನಗಿದ್ದು, ಒಳ್ಳೆಯದನ್ನು ಮಾಡಿದರೆ ದೇವರಿಗೆ ಪ್ರಿಯನಾಗುತ್ತಾನೆ ' ಎಂದು. ಒಟ್ಟಾರೆ ಎಲ್ಲ ಧರ್ಮಗಳ ಸಮ್ಮಿಲನವು ಮಾನವೀಯತೆಯನ್ನು ಎತ್ತಿ ಹಿಡಿಯಬೇಕು ಎಂಬುದೇ ನನ್ನ ಆಸೆ. ನನ್ನ ಧರ್ಮವು 'ರಾಮ-ಕೃಷ್ಣ'ರದ್ದಲ್ಲ. ಅವರ ಬದುಕಿನ ರೀತಿಯದ್ದು. ನನ್ನ ಧರ್ಮ 'ಅಲ್ಲಾ', 'ಬುದ್ಧ' ಅಥವಾ 'ಕ್ರಿಸ್ತನ'ದ್ದಲ್ಲ; ಶಾಂತಿ ಸಹನೆಗಳದ್ದು. ನನ್ನ ನಿಜ ಧರ್ಮ 'ಮಂತ್ರ'ಗಳದ್ದಲ್ಲ; ಅವುಗಳ ಹಿಂದೆ ಅಡಕವಾಗಿರುವ "ಅರ್ಥ"ಗಳದ್ದು. ಎಲ್ಲರೂ ಹೀಗೆ ಯೋಚಿಸಿದರೆ ಭೂಮಿ ಸ್ವರ್ಗವಾಗುತ್ತದೆ. ಯೋಚನೆ ನನ್ನಲ್ಲಿ ಚಿರಸ್ಥಾಯಿಯಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ!

ªÀÄvÉÛà ¹UÉÆÃt UɼÀAiÀÄ/UɼÀw…………………………..

Wednesday 13 April 2011

ಎಲ್ಲರ ಹಾಗೇ ನನ್ನದೂ ಅಂತ ಒಂದು ಫೇಸ್‌ಬುಕ್ ಅಕೌಂಟ್

ಎಷ್ಟು ಸಮಯವಾಗಿಬಿಟ್ಟಿದೆಯಲ್ಲವೆ ಚಿನ್ನು ನಿನ್ನೊಟ್ಟಿಗೆ ಮಾತಾಡಿ, ಮತ್ತೆ ನಿನ್ನನ್ನು ನೋಡಿ ಮಾತಾಡುತ್ತೇನೋ ಇಲ್ಲವೋ. ಅದಕ್ಕೋಸ್ಕರ ಬರೆಯಲು ಕುಳಿತಿದ್ದೇನೆ, ಎಂದಾದರೊಂದು ದಿನ ಪತ್ರ ನಿನ್ನನ್ನು ಮುಟ್ಟಬೇಕೆಂಬ ಅಸೆ. ನಿನ್ನ ನೋಡದೆ, ನಿನ್ನೊಂದಿಗೆ ಮಾತಾಡದೆ ಕಳೆದ ದಿನಗಳೇ ಇರುತ್ತಿರಲಿಲ್ಲ, ಆದರೀಗ ನೀನು ನನ್ನ ಅಗಲಿ ಹೋಗಿ ವರ್ಷವಾಗಿಬಿಟ್ಟಿದೆ. ಇಷ್ಟು ದಿನಗಳನ್ನು ಎದುರಿಸಿ ಇಂದು ಹೀಗೆ ಕುಳಿತು ಬರೆಯುತ್ತಿರುತ್ತೇನೆ ಎಂದು ನಂಬಿರಲಿಲ್ಲ. ನೀನಿಲ್ಲದೆ ಒಂದು ವಾರ ಕಳೆಯುತ್ತೇನೋ ಇಲ್ಲವೋ ಎಂಬ ಅನುಮಾನವಿತ್ತು. ಅನುಮಾನಕ್ಕೆ ಬಲವಾದ ಕಾರಣಗಳಿತ್ತು.ನಿನ್ನ ಬಿಟ್ಟರೆ ಬೇರೆ ಏನೂ ತಿಳಿದಿರಲಿಲ್ಲ. ಖುಷಿಯಾದರೆ ಮೊದಲು ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ, ದುಃಖವಾದರೆ ನಿನ್ನ ಮಡಿಲಲ್ಲಿ ಮಲಗಿ ಅಳುತ್ತಿದ್ದೆ. ನೀನು ಬಳಿಯಿದ್ದರೆ ನನ್ನ ಎಲ್ಲ ನೋವುಗಳನ್ನು ಮರೆಯುತ್ತಿದ್ದೆ. ಏನೇ ಆದರೂ ನೀನೊಬ್ಬಳಾದರೂ ನನ್ನೊಂದಿಗೆ ಯಾವಾಗಲೂ ಇರುತ್ತೀಯ ಎಂದು ನಂಬಿದ್ದೆ ಚಿನ್ನು. ನಂಬಿಕೆಯೇ ಜೀವಿಸುವ ಉತ್ಸಾಹ ತಂದುಕೊಟ್ಟಿದ್ದು. ನೀನು ಬಳಿಯಿದ್ದರೆ ನನಗೆ ಪ್ರಪಂಚ ಎಷ್ಟು ಚಂದವೆನಿಸುತ್ತಿತ್ತು ಗೊತ್ತೆಯಾವುದೋ ಕಾರಣಕ್ಕೆ ಅಚಾನಕ್ಕಾಗಿ ಒಂದು ದಿನ ದೂರಾಗಿಬಿಟ್ಟೆ. ನೀನು ಕೂಡ ನನ್ನನ್ನು ಬಿಟ್ಟು ಎಷ್ಟು ದಿನ ಇರಬಲ್ಲೆ? ಸ್ವಲ್ಪ ಸಮಯದ ನಂತರ ಬಂದೆ ಬರುತ್ತೀಯ ಎಂದು ನಂಬಿದ್ದೆ. ಆದರೀಗ ವರ್ಷವಾಗಿಬಿಟ್ಟಿದೆ. ನಿನಗೆ ನನ್ನ ನೆನಪೇ ಬರಲಿಲ್ಲವೆ ಚಿನ್ನು? ನನ್ನೊಂದಿಗೆ ಮಾತಾಡಬೇಕೆನಿಸಿಲ್ಲವೆ? ನಿನ್ನ ಬಿಟ್ಟು ಇಷ್ಟು ದಿನ ಇರುತ್ತೇನೆಂದು ನಂಬಿರಲಿಲ್ಲ. ನೀನು ಹಿಂದಿರುಗಿ ಬಂದೇ ಬರುತ್ತೀಯ ಎಂಬ ಒಂದೇ ನಂಬಿಕೆಯೊಂದಿಗೆ ಬದುಕಿದ್ದೇನೆ. ನಿನ್ನ ಬರುವನ್ನೇ ಎದುರು ನೋಡುತ್ತಿದ್ದೇನೆ. ನಂಬಿಕೆ ನನ್ನ ಹೃದಯವನ್ನು ಬಿಟ್ಟು ಹೋಗುವ ಮುನ್ನ ಬಂದುಬಿಡು ಚಿನ್ನು…..
ಕತ್ತಲಲಿ ತೊಳಲಾಡುತ್ತಿದ್ದ ನನ್ನ ಬದಿಕನಲ್ಲಿ ನೀ ಕಾಣಿಸಿಕೊಂಡೆ, ಕೈ ಹಿಡಿದು ಬೆಳಕಿನತ್ತ ನೆಡೆಸಿದೆ. ಬದುಕಿಗೊಂದು ಹೊಸ ಅರ್ಥ ನೀಡಿದೆನೀ ಇಲ್ಲದಿದ್ದರೆ ಇಷ್ಟು ದಿನ ಬದಿಕುತ್ತಿದ್ದೆನ? ಗೊತ್ತಿಲ್ಲಒಂಟಿತನದಿಂದ ಬೇಸತ್ತಿದ್ದ ನನಗೆ ಜೀವದ ಗೆಳತಿಯಾದೆ. ಬದುಕಲು ಸ್ಫೂರ್ಥಿನೀಡಿದೆ. ಮರುಳುಗಾಡಿನಲ್ಲಿ ಅಲೆಯುತ್ತ ಸೋತವನಿಗೆ ನೀರು ಕಂಡ ಹಾಗೆನಿನ್ನ ಜೊತೆ ಕಳೆದ ಕ್ಷಣಗಳು ನನ್ನ ಕಣ್ಣಿಗೆ ಕಟ್ಟಿದಂತಿದವೆ. ಅವನ್ನು ಮರೆಯಲು ಸಾಧ್ಯವೇನೇ? ತುಟಿಯಂಚಿನ ನಿನ್ನ ತುಂಟ ನಗೆಯನ್ನು ನೋಡಲು ಮನದ ದುಗುಡವೆಲ್ಲ ದೂರಾಗಿ ಜೀವಕ್ಕೆ ಹೊಸ ಉತ್ಸಾಹ ಬರುತ್ತಿತ್ತು. ಇಬ್ಬರೆ ಕೂತು ಮಾತಾಡುತ್ತಿದ್ದೆವಲ್ಲ, ಅದೆಷ್ಟು ಮಾತುಗಳಿದ್ದವೊಇಂದೇನಾಯಿತೆ ಹುಡುಗಿ, ಮಾತುಗಳೆಲ್ಲ ಮುಗಿದು ಹೋದವೇ…? ಏತಕೀ ಮೌನನಾ ಕಂಡದ್ದು ಬರೀ ಮರೀಚಿಕೆಯೆ? ನಿನ್ನ ನೊಡಿ, ನಿನ್ನೊಂದಿಗೆ ಮಾತಾಡಿ ತಿಂಗಳುಗಳೆ ಕಳೆದಿವೆ, ಎಲ್ಲಿ ಮರೆಯಾದೆ? ನಿನ್ನ ನಗು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿದೆ, ಜೀವಕ್ಕೆ ಜೀವದಂತಿದ್ದ ಗೆಳೆಯ ನಿನಗಿಂದು ನೆನಪಾಗುತ್ತಿಲ್ಲವೇ…? ಈಗ ನೀ ಎಲ್ಲಿರುವೆಯೋ ತಿಳಿಯದು, ಎಲ್ಲಿದ್ದರೂ ಚೆನ್ನಾಗಿದ್ದರೆ ನನಗಷ್ಟೆ ಸಮಾಧಾನ, ಎಂದಾದರೊಮ್ಮೆ ಗೆಳೆಯನ್ನ ನೆನೆಪಿಸಿಕೊಳ್ತಿಯ ಎಂದು ನಂಬಿದ್ದೇನೆನಿನಗಾಗಿ ಕಾಯುತ್ತ ಕುಳಿತಿದ್ದೇನೆ…..
ಎಲ್ಲರ ಹಾಗೇ ನನ್ನದೂ ಅಂತ ಒಂದು ಫೇಸ್‌ಬುಕ್ ಅಕೌಂಟ್ ಅಂತ ಓಪನ್ನ್ ಮಾಡಿಕೊಂಡು ಅದರಲ್ಲಿ ಸುಮಾರು ನಾಲ್ಕು ವರ್ಷದಿಂದ ಒಂದಿಷ್ಟು ಗೀಚಿದ್ದು ಈಗ ಇತಿಹಾಸ... ಇ-ಮೇಲ್, ಬ್ಲಾಗು, ಕಮ್ಮ್ಯೂನಿಟಿ ಕೆಲಸ ಮೊದಲಾದ ಎಲ್ಲವಕ್ಕೂ ಆಶ್ರಯಕೊಟ್ಟು ಅವುಗಳನ್ನು ನೀರೆರೆದು ಪೋಷಿಸುವ ಅನೇಕ ಗೊಂದಲಗಳ ನಡುವೆ ಈ ಫೇಸ್‌ಬುಕ್ಕ್ ಮತ್ತು ಟ್ವಿಟ್ಟರ್ ಅಕೌಂಟುಗಳು ಸೊರಗುತ್ತಲೇ ಬಂದವು.

ಅದರಲ್ಲೂ ಇತ್ತೀಚೆಗೆ ತೆಗೆದು ನೋಡಿದಾಗ ಸುಮಾರು ೪೯ ಜನ ಫ್ರೆಂಡ್ ಲಿಸ್ಟಿನಲ್ಲಿ ಕಾಯ್ದು ಕುಳಿತಿದ್ದೂ ಕಂಡುಬಂತು, ಇವರ ಜೊತೆಯಲ್ಲಿ ಇದ್ದವರಲ್ಲಿ ನನ್ನ ಹೊಸ ಬಾಸ್ ಕೂಡ ಒಬ್ಬರು! ಈ ವರ್ಚುವಲ್ಲ್ ಪ್ರಪಂಚದ ಸಂಬಂಧಗಳೂ ಸಹ ನಮ್ಮ ಉಳಿವಿಗೆ ಅಗತ್ಯವಾಗಿರೋವಾಗ, ಅದರಲ್ಲಿನ ಪ್ರತಿಯೊಂದು ಎಳೆಗಳೂ ಕೂಡ ಪೋಷಣೆಯನ್ನು ಬೇಡುತ್ತಿರುವಾಗ ನಾನೊಬ್ಬನೇ ಕಣ್ಣು ಮುಚ್ಚಿ ಕುಳಿತುಕೊಂಡರೆ ಅದು ನನ್ನ ನಷ್ಟವಲ್ಲದೇ ಇನ್ನೇನು? ಹೀಗೆ, ಯೋಚಿಸಿಕೊಂಡಾಗೆಲ್ಲ ಫೇಸ್‌ಬುಕ್ ನಂತಹ ದೈತ್ಯ ಸಾಮಾಜಿಕ ಯೋಧನೊಬ್ಬನನ್ನು ಎಷ್ಟು ದಿನವಾದರೂ ಅಲಕ್ಷಿಸಲಾದೀತು?

Facebook - ಅನ್ನೋ ಪದದಲ್ಲಿ Face ಅಂದ್ರೆ ಮುಖವೋ ಅಥವಾ Face it! ಅನ್ನೋ ಹಾಗೆ ಎದುರಿಸೋದೋ? book ಅಂದ್ರೆ ನಮಗೆ ಗೊತ್ತಿರೋ ಪುಸ್ತಕ, ಹೊತ್ತಿಗೆಗಳೋ ಅಥವಾ book it! ಅನ್ನೋ ಹಾಗೆ ಕಾದಿರಿಸೋದೋ? Face ಮತ್ತು book ಎರಡೂ ಸೇರಿ ಆಗಿರೋ ಹೊಸ ಪದವೋ ಅಥವಾ ಕ್ರಾಂತಿಯೋ? ಇದಕ್ಕೆ ಪ್ರಪಂಚಾದಾದ್ಯಂತ 500 ಕ್ಕೂ ಹೆಚ್ಚು ಮಿಲಿಯನ್ನ್ ಬಳಕೆದಾರರಿದ್ದಾರಂತೆ, ಪ್ರತಿಯೊಬ್ಬ ಬಳಕೆದಾರನ ಹೆಸರಿನಲ್ಲಿ ಸುಮಾರು $2 ರಂತೆ ವರ್ಷಕ್ಕೆ ಒಂದು ಬಿಲಿಯನ್ನ್‌ಗಿಂತ ಹೆಚ್ಚು ರೆವಿನ್ಯೂ ಇದೆಯಂತೆ, ಕೆಲವರ $38 ರಿಂದ ಹಿಡಿದು ಮೈಕ್ರೋಸಾಫ್ಟಿನ $200 ಪ್ರತಿ ಬಳಕೆದಾರರಿಂದ ಹುಟ್ಟೋ ರೆವಿನ್ಯೂವರೆಗಿನ ಲೆಕ್ಕಗಳಲ್ಲಿ ಸುಮಾರು 50 ಬಿಲಿಯನ್ನ್ ವ್ಯಾಲ್ಯೂವೇಷನ್ನಿನ ಅಂದಾಜು ಮಾಡಿದ್ದಾರಂತೆ! ಗೂಗಲ್ಲ್ ಅಂಥಾ ಕಂಪನಿಗಳಲ್ಲಿ ಒಬ್ಬೊಬ್ಬ ಬಳಕೆದಾರನ ಮೇಲೆ ಸುಮಾರು $14 ರಂತೆ ಆದಾಯ ಹುಟ್ಟಿಸುತ್ತಾರಾದರೂ, Facebook ಅಂಥ ಕಂಪನಿಗಳು ತಮ್ಮ ಇರುವನ್ನು ಬಲಪಡಿಸಿಕೊಳ್ಳಲು ಅನೇಕಾನೇಕ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರಂತೆ, ಇರುವ ಬಳಕೆದಾರರ ಬೇಸ್ ಅನ್ನು ಕ್ಯಾಪಿಟಲೈಸ್ ಮಾಡಿಕೊಳ್ಳುವ ಒತ್ತಡದಲ್ಲಿದ್ದಾರಂತೆ...ಹೀಗೆ ಅನೇಕಾನೇಕ ವಿಶೇಷಗಳು Facebook ಅನ್ನು ಸುತ್ತಿಕೊಳ್ಳತೊಡಗಿದ್ದು ಗೊತ್ತಾಯಿತು.

ಅಂತರಂಗದಲ್ಲಿ ಉದ್ದುದ್ದವಾಗಿ ಬರೆದ ಹಾಗೆ ಅಲ್ಲಿ ನನಗೆ ಬರೆಯೋಕಾಗೋದಿಲ್ಲ, ಬರೆದರೂ ಚಿಕ್ಕ ಫೋನುಗಳಲ್ಲಿ ಫಾಲ್ಲೋ ಮಾಡುವವರಿಗೆ ಕಷ್ಟವಾಗುತ್ತೆ. ಆದರೂ ಸಹ, ಅಂತರಂಗ ಮತ್ತು ನನ್ನ Facebook ಅಕೌಂಟುಗಳನ್ನು ಎರಡೂ ಒಟ್ಟು ಸೇರಿಸಿ, ಇಷ್ಟು ದಿನ ಹಿಡಿದುಕೊಂಡಿದ್ದ ಸುಮಾರು ನಲವತ್ತು ಜನ ಕನ್ನಡಿಗರನ್ನು ಬರಮಾಡಿಕೊಂಡರಾಯಿತು, ಕನ್ನಡಿಗರಷ್ಟೇ ಏಕೆ ಉಳಿದವರೂ ನೋಡಲಿ - ಎಲ್ಲರೂ ಬರಲಿ, ನನ್ನ ಈಗಿನ ಬಾಸ್ ಒಬ್ಬರನ್ನು ಬಿಟ್ಟು! (ಇಲ್ಲಿ ಕನ್ನಡದಲ್ಲಿ ಬರೆಯೋಕೆ ಈತನಿಗೆ ಸಮಯವಿದೆ ಅಂಥ ಮತ್ತೊಂದಿಷ್ಟು ಕೆಲಸ ಹುಟ್ಟಿಕೊಂಡರೆ ಕಷ್ಟ, ಹಾಗಾಗಿ).

ಈ ಅಂತರ್ಜಾಲ ಯುಗದ ಸಂಬಂಧಗಳು ಬಹಳ ಸಡಿಲವಾದದ್ದು - ಉದಾಹರಣೆಗೆ ಈ ಫೇಸ್‌ಬುಕ್ಕಿನ ಮಿಲಿಯನ್ನುಗಟ್ಟಲೆ ಬಳಕೆದಾರರಿಗೆ ಮತ್ತೊಂದೇನಾದರೂ ಆಕರ್ಷಕವಾಗಿ ಕಂಡುಬಂದರೆ ಅವರೆಲ್ಲರೂ ಅಲ್ಲಿಗೆ ಒಂದೇ ನೆಗೆತದಲ್ಲಿ ಹೋಗದಂತೆ ತಡೆಯುವುದು ಕಷ್ಟ. ಹಗಲೂ ರಾತ್ರಿ ಈ ಸರ್ವರುಗಳಿಗೆ ಜನ ಮುಗಿ ಬಿದ್ದ ಹಾಗೆ, ಪ್ರಸಿದ್ಧಿ ಅಥವಾ ಪ್ರಾಬಲ್ಯದ ಉತ್ತುಂಗದಲ್ಲಿರುವುದು ಬಹಳ ಕಷ್ಟದ ಕೆಲಸ - ಸುತ್ತಲಿನ ಆಗುಹೋಗುಗಳಿಗೆ ತತ್ಕಾಲದಲ್ಲಿ ಸ್ಪಂದಿಸಿ ನಿರಂತರವಾಗಿ ಬದಲಾಗುವುದರ ಜೊತೆಗೆ ಸದಾಕಾಲ ತಮ್ಮನ್ನು ತಾವು ರಿಫೈನ್ ಮಾಡಿಕೊಳ್ಳುವ ಕರ್ಮಠತನ ಬೇಕಾಗುತ್ತದೆ. ಬರೀ ಬಳಕೆದಾರರ ಸಂಬಂಧಗಳನ್ನಷ್ಟೇ ಅಲ್ಲ, ಹಣತೊಡಗಿಸಿದವರನ್ನು ಎದುರಿಸಬೇಕಾಗುತ್ತದೆ, ಪೈಪೋಟಿ ಒಡ್ಡುವವರನ್ನು ಹಿಂದಿಕ್ಕಬೇಕಾಗುತ್ತದೆ...ಹೀಗೆ ಅನೇಕಾನೇಕ ಸವಾಲುಗಳು ಯಾವಾಗಲೂ ಇದ್ದೇ ಇರುತ್ತವೆ. ಈ ಸವಾಲುಗಳು ಹೊಸತೇನಲ್ಲ - ಆನೆಗೆ ಆನೆಯ ಭಾರ, ಇರುವೆಗೆ ಇರುವೆಯ ಭಾರ ಅಷ್ಟೇ.

ಈ ಮೂಲಕ ಅಂತರಂಗದ ಓದುಗರಿಗೂ ಫೇಸ್‌ಬುಕ್ಕ್‌ನಲ್ಲಿ ಲಿಂಕ್ ಒದಗಿಸುತ್ತಿದ್ದೇನೆ. ನಮ್ಮ ಸಂವಹನ, ಸಂಘಟನೆ ಹಾಗೂ ಸಂಘರ್ಷಗಳು ನಿರಂತರವಾಗಿರಲಿ. ನಮ್ಮ ಜಗಳಗಳಲ್ಲೂ ಸೊಗಸಿರಲಿ, ಭಾಷೆಯಲ್ಲಿ ಶುದ್ಧಿ ಇರಲಿ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸು ಸದಾ ಊರ್ಧ್ವಮುಖಿಯಾಗಿರಲಿ!


Tuesday 12 April 2011

ಕೇವಲ ನೆನಪಿಗಾಗಿ..

ಇದು ಪುಟ್ಟ ಕವನ... ಅದರೊಳಗೇ  ಬಚ್ಚಿಟ್ಟುಕೊಂಡಿದೆ.. ತನ್ನ ಮೌನ ಆಕ್ರಂದನ... ನಾಲ್ಕೇ ಸಾಲುಗಳ ಅಪಕ್ವ ವೆನಿಸುವ ನುಡಿಗಳು.. ಆದರೂ.. ತನ್ನೊಳಗೆ..ಅಡಗಿಸಿದ ಯಾರೂ ಅರ್ಥೈಸದ ... ಯಾರಿಗೂ ಬೇಡದ ಸಾವಿರಾರು..  ಪರಿಪಕ್ವ ವಿಚಾರಗಳ..ಕೋಟ್ಯಾಂತರ ನಿಟ್ಟುಸಿರುಗಳ ಒಳಗೊಂಡ ಪುಟ್ಟ ಕವನ.. ಜೊತೆಗೆ ತನ್ನ ಮೌನ ಆಕ್ರಂದನ.. ತುಟಿಯಾಚೆ ಬಾರದೆ... ಮನದೊಳಗೆ ಕೂರದೆ...ಸದ್ದೇ ಮಾಡದಂತೆ  ಇದ್ದೂ ಇಲ್ಲದಂತೆ... ಇಲ್ಲದೆಯೂ ಇರುವಂತೆ... ತನ್ನ ಅಸ್ತಿತ್ವವನ್ನೇ.. ಪ್ರಶ್ನಿಸಿಕೊಳ್ಳುವ ಕವನ..!ಅಗೋಚರ ಪದಗಳ.. ಅಚ್ಚರಿಯ ಅರ್ಥಗಳ.. ಒಮ್ಮೆಲೇ.. ಒಳಗೊಂಡ ಪುಟ್ಟ ಕವನ.. ಜೊತೆಗೆ ತನ್ನ ಮೌನ ಆಕ್ರಂದನ....
ಮನವೇ ಪ್ರಕೃತಿ.. ಆಗಸವೇ ನಿರೀಕ್ಷೆ... ಭಾವವೇ ಸಾಗರ ಕನಸಿನ ತೀರದಲ್ಲೇ ಆಸೆಗಳ ಮರಳ ಗೂಡು... ಕಲ್ಪನೆಗಳೇ ಆಗಾಗ ಮೂಡುವ ಅಲೆಗಳಂತೆ.... ಎಲ್ಲವೂ ಸರಿ ಇದ್ದರೆ... ಮನದ ಪ್ರಕೃತಿ ನಗುತಲೇ ಇದ್ದರೆ... ಆಸೆಗಳ ಮರಳ ಗೂಡು ಹಾಗೇ ಉಳಿಯಬಹುದು ಎಂದಿಗೂ ಅಳಿಯದ  ನೆನಪಿನ ಕೃತಿಯಾಗಿ... ಅಕಸ್ಮಾತ್... ಮನದ ಪ್ರಕೃತಿ ಮುನಿದು.... ಭಾವಗಳ ಸಾಗರ ಹುಚ್ಚಾಗಿ ಕುಣಿದು...ಕಲ್ಪನೆಗಳ ಸುನಾಮಿ ಅಲೆಗಳು..ಭೋರ್ಗರೆದು ಅಪ್ಪಳಿಸಿದರೆ... ಆಸೆಗಳ ಮರಳ ಗೂಡು ಕೊಚ್ಚಿ ಹೋಗಬಹುದು... ಅಳಿದು ಹೋಗಿ ಕಾಡಬಹುದು.. ಕೇವಲ ನೆನಪಾಗಿ... ! ಕೊನೆಗೆ .... ಉಳಿಯುವುದು... ಆಗಸವೆಂಬ ನಿರೀಕ್ಷೆ ಮಾತ್ರ... ಆಗಸ ಎಂದಿಗೂ ಅಳಿಯದ ಅಚ್ಚರಿ... ಮತ್ತೆ ಮರಳ ಗೂಡು ಕಟ್ಟಬೇಕೆ... ? ಪ್ರಕೃತಿ ಸಿದ್ಧಳಾಗುವ ವರೆಗೂ ಕಾಯಬೇಕು ... ಅಲ್ಲಿಯವರೆಗೂ... ನಿರೀಕ್ಷೆಯ ಆಗಸವನ್ನೇ ನೋಡಬೇಕು.. ಕೇವಲ ನೆನಪಿಗಾಗಿ..